`ಜಯಮ್ಮನ ಮಗ` ಡಿ ಟಿ ಎಸ್ ಮನೆಗೆ
Posted date: 22 Mon, Jul 2013 – 08:19:30 AM

ಧುನಿಯ ವಿಜಯ್ ಅವರ ಪ್ರಥಮ ನಿರ್ಮಾಣದ ಚಿತ್ರ ‘ಜಯಮ್ಮನ ಮಗ’ ಹಲವು ವಿಶೇಷಗಳ ಉಡುಗೊರೆ ನೋಡುಗರಿಗೆ ಈಗಾಗಲೇ ಹೆಚ್ಚು ನೋಡುಗರನ್ನು ಯು ಟ್ಯೂಬು ಅಲ್ಲಿ ಸೃಷ್ಟಿಸಿಕೊಂಡಿದರುವಕ್ಕೆ ಕಾರಣ ಚಿತ್ರದಲ್ಲಿ ಅಳವಡಿಸಲಾಗಿರುವ ತಂತ್ರಗಾರಿಕೆ. ನಾಯಕ ನಿರ್ಮಾಪಕ ಆದಾಗ ಏನೇನು ಬೇಕೋ ಅವೆಲ್ಲವನ್ನು ಶ್ರಮ, ಶ್ರದ್ದೆ ಹಾಗೂ ಫ್ಯಾಶನ್ ಇಂದ ವಿಜಯ್ ಅವರು ಒದಗಿಸಿಕೊಟ್ಟಿದ್ದಾರೆ. ಈ ಚಿತ್ರದಲ್ಲಿ ವಿಜಯ್ ಈಗಾಗಲೇ 360 ಡಿಗ್ರೀ ತಿರುಗಿ ಕ್ರೇಸ್ಕೆಂಟ್ ಕಿಕ್ ಅನ್ನು ಮಾಡಿ ಅವರ 16 ವರ್ಷಗಳ ಕನಸನ್ನು ನನಸಾಗಿಸಿಕೊಂಡಿದ್ದಾರೆ. ಚಿತ್ರದ ಶೀರ್ಷಿಕೆ ಗೀತೆಗೆ ಸ್ವತಃ ವಿಜಯ್ ಅವರೇ ಹೇಳಿ ಮನೆ ಮನೆ ಮಗನಾಗಿ ‘ಜಯಮ್ಮನ ಮಗ’ ಚಿತ್ರದಲ್ಲಿ ಕಂಗೊಳಿಸಿದ್ದಾರೆ. ನೃತ್ಯ ನಿರ್ದೇಶಕ ಮುರಳಿ ಅವರು ಎಂಟು ಬಗೆಯ ವೇಷ ಭೂಷಣಗಳನ್ನು ತೊಡಿಸಿ ವಿಜಯ್ ಅವರನ್ನು ಕುಣಿಸಿದ್ದಾರೆ.
ಈ ಚಿತ್ರವನ್ನು ಸಮಸ್ತ ತಾಯಂದರಿಗಾಗಿ ವಿಜಯ್ ಅರ್ಪಿಸುತ್ತಿದ್ದಾರೆ. ಅವರ ಹೆತ್ತವರ ಹೆಸರಿನಲ್ಲಿ ಈ ಚಿತ್ರದ ನಿರ್ಮಾಣ ಸಹ ಮಾಡುತ್ತಿದ್ದಾರೆ.  ಜಯಮ್ಮನ ಮಗ ಚಿತ್ರದ ಅಡಿ ಬರಹ ‘ಇವ್ನ ಹಿಡ್ಕೊಳ್ಳಿ ನೆಮ್ಮದಿ ತಂಡ್ಕೊಳ್ಳಿ’ ಎಂದು ಹೇಳಲಾಗಿದೆ. ಯೋಗರಾಜ್ ಭಟ್ ಅವರು ಬರೆದಿರುವ ಹಾಡಿನ ಸಲಿನಿಂದ ಆಯ್ಕೆ ಮಾಡಲಾಗಿದೆ.

ಕರಿ ಸುಬ್ಬು ಅವರ ಬಾಲಾಜಿ ಡಿಜಿಟಲ್ ಸ್ಟುಡಿಯೋದಲ್ಲಿ ಡಿ ಟಿ ಎಸ್ ಮುಗಿಸಿಕೊಂಡು ಚಿತ್ರವೂ ಆಗಸ್ಟ್ ಮೊದಲ ವಾರದಲ್ಲಿ ಹಾಡುಗಳ ಧ್ವನಿ ಸುರುಳಿ ಬಿಡುಗಡೆ ಮಾಡಿಕೊಳ್ಳಲಿದೆ. ಆಗಸ್ಟ್ ತಿಂಗಳಲ್ಲಿ ಸಿನೆಮಾದ ಬಿಡುಗಡೆ ಸಹ ಆಗಲಿದೆ ಎಂದು ನಿಯೋಜಿಸಲಾಗಿದೆ.

ಹೆಸರಾಂತ ನಿರ್ದೇಶಕ ಯೋಗರಾಜ್ ಭಟ್ ಅವರ ಮತ್ತೊಬ್ಬ ಶಿಷ್ಯ ವಿಕಾಸ್ ಅವರ ಚೊಚ್ಚಲ ನಿರ್ದೇಶನದ ಚಿತ್ರ, ಅವರು ಕಳೆದ 9 ವರ್ಷಗಳಿಂದ ನಾಯಕ ನಿರ್ಮಾಪಕ ಅವರಿಗೆ ಪರಿಚಯ. ಇದೊಂದು ಅನಿರೀಕ್ಷಿತ ಅವರಕಶ ನಿರ್ದೇಶನ ಮಾಡಲು ಎನ್ನು ಅವರು ಚಿತ್ರದ ಕಥಾ ವಸ್ತು ನೀಡಿದವರು ವಿಜಯ್ ಅವರೇ ಎಂದು ತಿಳಿಸುತ್ತಾರೆ ವಿಕಾಸ್.
ರಾಜ್ಯ ಪ್ರಶಸ್ತಿ ನಟಿ ಕಲ್ಯಾಣಿ ಅವರು ‘ಜಯಮ್ಮನಾಗಿ’ ಅಭಿನಯಿಸಿದ್ದಾರೆ. ರಂಗಾಯಣ ರಘು ‘ಜಯಮ್ಮನ ಮಗ’ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೂಡನಂಬಿಕೆಯ ಸುತ್ತ ರಚಿಸಿರುವ ಕಥೆಯ ನಾಯಕಿ ಡಾಕ್ಟರ್ ಭಾರತಿ. ಉದಯ್ ಈ ಚಿತ್ರದಲ್ಲಿ ಖಳ ನಟರಾಗಿ ಅಭಿನಯಿಸಿದ್ದಾರೆ. ಅನಿಲ್, ವಿಜಯ್ ಅವರ ಪುತ್ರ ಸಾಮ್ರಾಟ್ ವಿಜಯ್ ಸಹ ಪಾತ್ರವರ್ಗದಲ್ಲಿ ಇರುವರು.
ಅರ್ಜುನ್ ಜನ್ಯ ಸಂಗೀತ ಇರುವ ಈ ಚಿತ್ರದಲ್ಲಿ ನಾಲ್ಕು ಭರ್ಜರಿ ಸಾಹಸ ಸನ್ನಿವೇಶಗಳಿವೆ. ಮಾಸ್ ಮಾಧ ಈ ಚಿತ್ರದ ಸಾಹಸ ನಿರ್ದೇಶಕರು. ಸುಜ್ಞಾನ್ ಈ ಚಿತ್ರದ ಛಾಯಾಗ್ರಾಹಕರು.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed